Previous Events sticky icon

ಕನ್ನಡೋತ್ಸವ ಸೆಪ್ಟೆಂಬರ ೧೭ರಂದು ಶಬೊ ಕಾಲೇಜುನಲ್ಲಿ !!

We are inviting 15 Well Known Artists from India to felicitate them as part of this event. So, please join us in welcoming them and honor them for their achievements in the music industry

ಕನ್ನಡ ಕೂಟದ 2016ರ ತಂಡ ಈ ಬಾರಿ ಕನ್ನಡೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ ೧೭ರಂದು ಶಬೊ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸುತ್ತಿದೆ. ಇದು ದಿನವಿಡೀ ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ,ಅನೇಕ ಚಟುವಟಿಕೆಗಳು ಸಭಾಂಗಣದ ಒಳಗೂ ಹೊರಗೂ ನಡೆಯಲಿವೆ. ಈ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಚಟುವಟಿಕೆಗಳು ೩ ವಿಭಾಗಳಲ್ಲಿ ನಡೆಯಲಿವೆ.

1. KKNC Got Talent (Competition)
2. KKNC ಕನ್ನಡ ಕಲರವ - ಕಂಸಾಳೆ, ಫ್ಯಾಷನ್ ಷೋ, ಬೀದಿ ನಾಟಕ,
ಆರು ಗುಣಗಳ ಸತ್ಯ - ಪಂಪಾ ನಾಟ್ಯವೃಂದದವರಿಂದ ಭರತನಾಟ್ಯ
3. Mano Lahari


Buy Tickets - here

೩. Mano Lahari - Mano Murthy Musical night

1 Kannadothsava Ticket = KKNC Got Talent + KKNC ಕನ್ನಡ ಕಲರವ + Mano Lahari

Buy Kannadothsava Tickets - here


ಸ್ವರ್ಣಸೇತು ೨೦೧೬ರ ಕಥಾಸ್ಪರ್ಧೆ !!
Deadline Extended to Sept 30th 2016

ಪ್ರತಿಯೊಬ್ಬರಲ್ಲೂ ಒಬ್ಬ ಒಳ್ಳೆಯ ಕಥೆಗಾರನೊಬ್ಬ ಅಡಗಿರುತ್ತಾನೆ. ಅವನಿಗೆ ಅಕ್ಷರ ರೂಪ ಕೊಟ್ಟು ಸಾಕ್ಷಾತ್ಕಾರಗೊಳಿಸಲು, ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ "ಸ್ವರ್ಣ ಸೇತು ೨೦೧೬" ಸುವರ್ಣಾವಕಾಶವೊಂದನ್ನು ನೀಡುತ್ತಿದೆ. ಕೌತುಕ ಕಥೆಯೊಂದನ್ನು ಬರೆಯಿರಿ. ಬಹುಮಾನವನ್ನು ಗೆಲ್ಲಿರಿ!

ಸ್ಪರ್ಧೆಯ ನಿಯಮಗಳು :

೧. ಕಥೆ ೧೫೦೦ ಪದಗಳನ್ನು ಮೀರದಿರಲಿ
೨. ಕಥೆ ಸ್ವಂತದ್ದಾಗಿರಬೇಕು
೩. ಕಥೆ ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು
೪. ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ
೫. ಭಾಷಾಂತರಿಸಿದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ
೬. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
೭. ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
೮. ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
೯. ಆಯ್ದ ಕಥೆಗಳನ್ನು ಸ್ವರ್ಣಸೇತು - ೨೦೧೬ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-೨೦೧೬ರ ಸಂಪಾದಕ ಸಮಿತಿಗೆ ಸೇರಿದ್ದು.
೧೦. ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು.
೧೨. ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ Sept 30th 2016
೧೩. ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - swarnasetu2016@googlegroups.com

Join KKNC Parade on India Independence Day Celebration on Aug 14th 2016 @ Fremont

ನಿಮಗೆ ತಿಳಿದಿರುವಂತೆ ಆಗಸ್ಟ್ 14ರಂದು Fremont ನಲ್ಲಿ FOG ಸಂಸ್ಥೆಯವರು India Independence Day Celebration ಆಯೋಜಿಸಿದ್ದಾರೆ. ಪ್ರತೀ ವರುಷದಂತೆ, ಈ ವರುಷವೂ ಕನ್ನಡ ಕೂಟವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲ್ಲುತ್ತಿದೆ ಎಂದು ತಿಳಿಸಲು ನಮಗೆ ಹೆಮ್ಮೆ.

ಈ ಪ್ರಯುಕ್ತ, ನಮ್ಮ Creative ಸಮಿತಿ, Jaisheela Kandagal ಮತ್ತು Shubha Prithvi Raj ಅವರ ನೇತೃತ್ವದಲ್ಲಿ ಈಗಾಗಲೇ, ಒಂದು ವೈಶಿಷ್ಟ್ಯವಾದ ವರ್ಣ ರಂಜಿತ ಗ್ಲೋಬ್ ಅನ್ನು ನಿರ್ಮಿಸುವಲ್ಲಿ ತೊಡಗಿದ್ದಾರೆ. ಈ ಗ್ಲೋಬಿನ ಸುತ್ತಲೂ ಕರ್ನಾಟಕದ ವೈವಿಧ್ಯತೆ ಬೀಗುವ ವಸ್ತ್ರಾಭರಣ ಗಳನ್ನು ಧರಿಸಿ ಕೂಡುವ ಕೂಟದ ಸದಸ್ಯರು. ನಿಮಗೆ ಅಥವಾ ನಿಮ್ಮ ಮಕ್ಕಳನ್ನು ಸೇರ್ಪಡೆ ಮಾಡಲು Uma Srinath ಅವರನ್ನು ಸಂಪರ್ಕಿಸಿ. ಸಾಮೂಹಿಕ ಹಾಡುಗಾರಿಕೆ ಹಾಗೂ ಸಾಮೂಹಿಕ ನೃತ್ಯವನ್ನೂ ಆಯೋಜಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪಾಲ್ಗೊಳ್ಳಲು Shashikala Murthy ಅವರನ್ನು ಸಂಪರ್ಕಿಸಿ.

ಈ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಶ್ರಮ, ಕೊಡುಗೆ ಅತ್ಯಗತ್ಯ. ಆಗಸ್ಟ್ 13 ರಂದು ತಯಾರಿ. ಆಗಸ್ಟ್ 14ರಂದು Parade. ನಮ್ಮೊಂದಿಗೆ ಕೈ ಜೋಡಿಸಲು Form ಭರ್ತಿ ಮಾಡಿ. ಬನ್ನಿ, ಕನ್ನಡ ಕೂಟವನ್ನು ನಾವೆಲ್ಲರೂ ಒಟ್ಟಾಗಿ ಪ್ರತಿನಿಧಿಸೋಣKKNC Sports Day on June 4th

ಕನ್ನಡ ಕೂಟದ Sports Day ಜೂನ್ 4ರಂದು Murdock Park, San Jose ನಲ್ಲಿ ಆಚರಿಸುತ್ತಿದೆ.

Sports Day ದಿನದಂದು ತಮ್ಮ ಅಡುಗೆ ಮನೆಯಲ್ಲಿ ತಯಾರಿಸಿದ ಸೊಗಸಾದ ಭಕ್ಷ್ಯಗಳನ್ನು ತಂದು ವಿಕ್ರಯಿಸುವುದೆಂದರೆ ಕೂಟದ ಸದಸ್ಯರಿಗೆ ಬಲು ಪ್ರೀತಿ. ಇಂದೇ ನೀವು ತರಲಿಚ್ಚುಸುವ ಪದಾರ್ಥಗಳನ್ನು ಇಲ್ಲಿ ಆಯ್ಕೆ ಮಾಡಿ

ನಿಮಗೆ Volleyball, ಅಥವಾ Throw Ball ಆಡಲು ಇಷ್ಟವಿದ್ದಲ್ಲಿ ಇಂದೇ ನೋಂದಾಯಿಸಿ.
Register @ here

KKNC is conducting 'Sports Day' on June 4th 2016 at Murdock Park, San Jose. We are planning for variety of sports events for all age groups including Kids, Adults and Visiting Parents - Volley ball, Throw ball, Track & Field events to name a few.

Sports day is embellished with food meLa prepared by volunteers with love. If you are interested in cooking up or lending a hand at cooking please sign up.

The listed items can be prepared as individuals or group, KKNC will reimburse cost of material upon receipt. Sign up for food here

As a run up towards the Sports day, we have already conducted Chess, Carrom, Table Tennis, Shuttle Badminton, Tennis and Cricket.

As always, we are seeking entries from all the Sports enthusiasts to participate for Volleyball, throwball. Here is the google form doc to register - here.

We look forward for an encouraging response from our KKNC Sports loving community!!KKNC is conducting 'Sports Day' on June 4th 2016 at Murdock Park, San Jose. We are planning for variety of sports events for all age groups including Kids, Adults and Visiting Parents - Volley ball, Throw ball, Track & Field events to name a few. We are also planning for a grand 'Food Mela' during Sports day!!

As a run up towards the Sports day, we have already conducted Chess, Carrom, Table Tennis, Shuttle Badminton, Tennis and subsequently we are planning to conduct Cricket on May 21st.

As always, we are seeking entries from all the Sports enthusiasts to participate. Here is the google form doc to register for these sports here

We look forward for an encouraging response from our KKNC Sports loving community!!ಕನ್ನಡ ಕಲಿ - 2016-17 ನೋಂದಣೆ ಪ್ರಾರಂಭವಾಗಿದೆ

ಕನ್ನಡ ಕಲಿ 2016-17 ರ ದಾಖಲಾತಿ ಪ್ರಾರಂಭವಾಗಿದೆಯೆಂದು ತಿಳಿಸಲು ಕನ್ನಡ ಕಲಿಯ ಪ್ರಾಂಶುಪಾಲರು ಮತ್ತು ಶಿಕ್ಷಕವರ್ಗದವರು ಹೆಮ್ಮೆ ಪಡುತ್ತಾರೆ. ಪ್ರತಿ ವರ್ಷದಂತೆ ಈ ವರುಷವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಮುಂದಿನ ಮೇ ತಿಂಗಳವರೆಗೂ ಜರುಗಲಿದೆ. ಶಾಲೆಯನ್ನು ಮಿಲ್ಪೀಟೆಸ್ನಲ್ಲಿ ಪ್ರತಿ ಶನಿವಾರ ಸಂಜೆ 4-5ರ ವರೆಗೆ ನಡೆಸಲಾಗುತ್ತದೆ. ಈ ವರ್ಷ, ಪೋಷಕರ ವಿನಂತಿಯ ಮೇರೆಗೆ, ಕನ್ನಡ ಕಲಿ ದಾಖಲಾತಿಯನ್ನು ಶಾಲಾದಿನಕ್ಕೂ ಮುಂಚಿತವಾಗಿ ತೆರವು ಗೊಳಿಸಿದ್ದೇವೆ.

ನೋಂದಾಯಿಸಲು, ಈ ಕೆಳಕಂಡ ದಾಖಲಾತಿ ಮನವಿ ಪತ್ರವನ್ನು ಭರ್ತಿಮಾಡಿ, ನಾಲ್ಕನೇ ತರಗತಿ ಶಿಕ್ಷಕರೂ ಹಾಗೂ ಕನ್ನಡ ಕಲಿ ಖಜಾಂಚಿಯೂ ಆದ ಶ್ರೀಮತಿ ಸಂಧ್ಯಾ ಗಾಯತ್ರಿ ಅಥವಾ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಶೇಖರ್ ಅವರಿಗೆ ಚೆಕ್ಕು/ನಗದು ಶುಲ್ಕದ ಜೊತೆಗೆ ತಲುಪಿಸ ಬೇಕಾಗಿ ಕೋರುತ್ತೇವೆ.

ದಾಖಲಾತಿ ಮನವಿ ಪತ್ರ - https://goo.gl/YMKwqp

ಮೇ 31ರ ನಂತರ ಹೆಚ್ಚಿಗೆ ಶುಲ್ಕವಿರುವ ಕಾರಣ, ಆದಷ್ಟೂ ಅಷ್ಟರ ಒಳಗೆ ನೋಂದಾಯಿಸ ಬೇಕೆಂದು ಕೋರುತ್ತೇವೆ. ಜೂನ್ 30 ನೋಂದಾಯಿಸಲು ಕೊನೆಯ ದಿನಾಂಖ.Kannada Kali is very excited to begin registrations for Kannada Kali's next academic year of 2016-17 from today! Kannada Kali school is run Sept-May for kids 5 years and above in Milpitas, CA from 4-5pm every Saturday.

Many parents requested that they wanted to register before School day as they would leave on vacation after that. So, we are starting registrations early this year. Please go to download the registration form here and submit the form along with either check or cash to Class 4 teacher & treasurer, Sandhya Gayathri OR Principal, Jyothi Shekar during the next few classes. You may also mail the form and check to the address on the form.

Regitration Form : here

PLEASE NOTE THAT EARLY BIRD ENROLLMENT ENDS ON MAY 31ST, 2016 AND ALL REGISTRATIONS END ON JUNE 30TH, 2016.

ABSOLUTELY NO ENROLLMENTS AFTER JUNE 30TH, 2016!

PLEASE ENROLL BY MAY 31ST AND AVOID EXTRA FEES! PLEASE SPREAD THE WORD TO OTHER INTERESTED FAMILIES AND FRIENDS!!!
2016 Camping - Registrations are Closed ! ಜುಲೈ 29- ಜುಲೈ 31 2016

ಕನ್ನಡ ಕೂಟದ 2016 Camping ಜುಲೈ 29- ಜುಲೈ 31ರ ವರೆಗೆ ಆಯೋಜಿಸಲಾಗುವುದು. ಕೂಟದ ಸದಸ್ಯರಿಗೆ ಕ್ಯಾಮ್‌ಪಿಂಗ್ ಅತಿ ಪ್ರಿಯಕಾರವಾದದ್ದು - ಸುಮಾರು 400 ಕನ್ನಡಿಗರ ಜೊತೆಗೂಡಿ ಕ್ಯಾಂಪ್ ಫೈಯರ್ ಬಳಿ ಕುಳಿತು ಹರಟೆ ಹೊಡೆಯುತ್ತಾ, ತಿಂಡಿ ತಿನಸುಗಳನ್ನು ತಯಾರಿ ಮಾಡುತ್ತಾ, ಹೈಕಿಂಗ್ ಇತ್ಯಾದಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಾ, ನಿಸರ್ಗದ ಸೌಂದರ್ಯವನ್ನು ಬಗೆಯುತ್ತಾ ನಕ್ಕು ನಲಿಯುವ ಮೂರು ದಿನದ ಅಮೋಘ ಅನುಭವ ನಮ್ಮ ಕ್ಯಾಮ್‌ಪಿಂಗ್ .

ಕೂಟದ ಸದಸ್ಯರಿಗೆ ತಮ್ಮದೇ ಟೆಂಟ್ ಹಾಕುವುದು ಬಹಳ ಅಚ್ಚು ಮೆಚ್ಚು. ನಿಮಗೆ ಟೆಂಟ್ ನಲ್ಲಿ ಮಲಗಲು ತೊಂದರೆ ಇದ್ದಲ್ಲಿ, ಕ್ಯಾಬಿನ್ ಸೌಲಭ್ಯ ವೂ ಇರುತ್ತದೆ.

Currently, both Tents and Cabins are sold out. Please note your reservation is confirmed only after the payment. So, If you had reserved, but not paid, you will be put on the waitlist.

ಸಮಯ : Jul 29th 2016 4PM to Jul 31st 2016 11AM
ಸ್ಥಳ : Little Basin (http://littlebasin.org/)Dr BKS Varma ಅವರೊಡನೆ ಕೂಟದ ವಸಂತ ವೈಭವ !!
ಕೂಟದ ವಸಂತ ವೈಭವ ಕಾರ್ಯಕ್ರಮ ಏಪ್ರಿಲ್ 10ರಂದು ಛಾಬೊ ಕಾಲೇಜ್ ನಲ್ಲಿ ಮೂಡಿಬಂದಿತು. ಸಂಧರ್ಭಕ್ಕೆ ಅನುಗುಣವಾದ ಚಿತ್ರಕಲೆಯನ್ನು ಥಟ್ ಎಂದು ಪ್ರೇಕ್ಷಕರ ಮುಂದೆ ನಿರ್ಮಿಸಿದರು ಅಪರೂಪದ ಚಿತ್ರ ಕಲಾವಿದ Dr BKS Varma.ಅವರೊಡನೆ ನಾಗಚಂದ್ರಿಕೆ ಭಟ್ ಅವರ ಗಾಯನ ನೆರೆದ ಜನರ ಮನ ಸೆಳೆಯಿತು. ಜೊತೆಗೆ ನಾಟ್ಯದಲ್ಲಿ ಗಣೇಶ್ ವಾಸುದೇವ ಹಾಗೂ ವಾದ್ಯ ವೃಂದದಲ್ಲಿ ಸ್ಥಳೀಯ ವಾದಕರು ಗೀತ-ಚಿತ್ರ-ನೃತ್ಯ ವೈಭವವನ್ನು ವಿಜೃಂಭಣೆಯಿಂದ ನಡೆಸಿ ಕೊಟ್ಟರು.

ಕಾರ್ಯಕ್ರಮ ಯಶಸ್ವಿ ಯಾಗಿ ಮೂಡಿಬರಲು ಶ್ರಮಿಸಿದ ಮನೋರಂಜನಾ ಸಮಿತಿ, ಸದಸ್ಯತ್ವ ಸಮಿತಿ ಹಾಗೂ ಊಟದ ವ್ಯವಸ್ಥೆ ನಡೆಸಿಕೊಟ್ಟ ಸ್ವಯಂ ಸೇವಕರಿಗೂ , ಛಾಯಾಗ್ರಹಣ, ಅಲಂಕರಣದಲ್ಲಿ ನೆರವಾದವರಿಗೂ, ಸ್ವರ್ಣಸೇತು ವರದಿಗಾರರಿಗೂ ನಮ್ಮ ಅನಂತಾನಂತ ಧನ್ಯವಾದಗಳು.

ಪ್ರೇಕ್ಷಕರ ಮನ ಸೆಳೆದ "ರಾಕ್ ಆನ್ ರಾಗ "

ಕನ್ನಡ ಕೂಟ ಮಾರ್ಚ್ 20 ರಂದು ನಮ್ಮ ಬೇ ಏರಿಯಾದ ಸುಪ್ರಸಿದ್ದ ಕನ್ನಡ ಮ್ಯೂಸಿಕ್ ಬ್ಯಾಂಡ್ "ರಾಗ" ಜೊತೆಗೂಡಿ, "ರಾಕ್ ಆನ್ ರಾಗ !!!" ಕಾರ್ಯಕ್ರಮವನ್ನು ಆಯೋಜಿಸಿತು. ಇದರಿಂದ ಸಂಗ್ರಹಿಸಿದ ಧನವನ್ನು"ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್" ಮತ್ತು "ಒನ್ ಸ್ಕೂಲ್ ಅಟ್ ಆ ಟೈಮ್" ಸಂಸ್ಥೆಗಳಿಗೆ ಕೊಡಲಾಗುವುದು. ನಯನ ಮನೋಹರ ದೀಪ ರಂಜಿತ ಸಭಾಂಗಣವು ಪ್ರೇಕ್ಷಕರನ್ನು ಧಿಗ್ಭ್ರಮೆ ಗೊಳಿಸುತ್ತಿದ್ದಂತೆ ರಾಗ ತಂಡದ ಕಲಾವಿದರು ತಮ್ಮ ಸುಶ್ರಾವ್ಯ ಸಂಗೀತದಲ್ಲಿ ಮೈ ಮರೆಸಿದರು. ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಿಕೊಟ್ಟ ರಾಗ ತಂಡಕ್ಕೆ ಕೂಟದ ಕಾರ್ಯಕಾರಿ ಸಮಿತಿ ಚಿರ ರುಣಿ.

ಸ್ನೇಹ ಸುಗ್ಗಿಯ ಪ್ರಯುಕ್ತ ಸಾವಿರಕ್ಕೂ ಮೀರಿದ ಕನ್ನಡ ಕೂಟದ ಜನ ಸಮೂಹ !!

ಮದ್ಯಾಹ್ನ 2ಕ್ಕೆ ಡೊಳ್ಳಿನ ಸದ್ದು ಬೇ ಏರಿಯಾ ಕನ್ನಡ ಜನ ಸಮೂಹವನ್ನು ಕಾರ್ಯಕ್ರಮಕ್ಕೆ ಬರೆ ಮಾಡಿಕೊಂಡಿತು. ನಮ್ಮ ಸದಸ್ಯತ್ವ ಸಮಿತಿ ನೆರೆದ ಜನರಿಗೆಲ್ಲ ಸದಸ್ಯತ್ವ ಪಡೆದು ದಿನದ ಕಾರ್ಯಕ್ರಮಕ್ಕೆ ನೋಂದಾಯಿಸಲು ಅನು ಮಾಡಿಕೊಟ್ಟಿತು. ಮೆರವಣಿಗೆಯ ಸಡಗರದಲ್ಲಿ ಸದಸ್ಯರು ಜೊತೆಗೂಡಿ ಒಮ್ಮತದಿಂದ ರಂಗಾಯಣವನ್ನು ಪ್ರವೇಶಿಸಿದರು.

ದೀಪ ಬೆಳಗಿ ಸದಸ್ಯರನ್ನು ಆಹ್ವಾನಿಸಿದರು ಕೂಟದ ಅಧ್ಯಕ್ಷರು. ಶ್ಲೋಕ ಉಚ್ಚಾರಣೆಯೊಂದಿಗೆ ಪ್ರಾರಂಭ ವಾದ ವೇದಿಕೆ, ಭಾವಧಾರೆ, ಪುಣ್ಯಕೋಟಿ, ಮಕ್ಕಳ ಜಾನಪದ ನೃತ್ಯ, ಅಪರೂಪದ ಕೊರವಂಜಿ ನೃತ್ಯ , ದಂಡಪಿಂಡಗಳು ಎಂಬ ಹಾಸ್ಯ ನಾಟಕ ನೆರೆದವರನ್ನು ಮನೋರಂಜಿಸಿತು. ಕೂಟದಿಂದ ಆಯೋಜಿಸಿದ ಪಂಚತಂತ್ರ ಪ್ರೇಕ್ಷಕರನ್ನು ಸೆಳೆಯಿತು.

ಒಂದು ತಾಸು ನೀಡಿದ ವಿರಾಮದಲ್ಲಿ, ಸದಸ್ಯರು, ರುಚಿಯಾದ ಭೋಜನ ಸವಿಯುತ್ತಾ ನಮ್ಮ ಚಂದಾ ನಿಗ್ರಹಣಾ ಸಮಿತಿ ಆಯೋಜಿಸಿದ ಪ್ರಾಯೋಜಕರ ಬೀಡುದಾಣಗಳಿಗೆ ಭೇಟಿ ಕೊಟ್ಟರು. ನಂತರ ನಡೆಯಿತು ನಯನ ಮನೋಹರ ತೊಗಲು ಗೊಂಬೆ ಆಟ. ನಡೆಸಿಕೊಟ್ಟ ಶ್ರೀ ಗುಂಡು ರಾಜು ಅವರಿಗೆ ಅನಂತಾನತ ಧನ್ಯವಾದಗಳು. ವಿಶೇಷ ಅತಿಥಿಗಳಾದ ಶ್ರೀಯುತ ರಾಜೇಶ್ ಕೃಷ್ಣನ್ ರವರು, ಶ್ರೀಮತಿ ಶೀಲಾ ರವರೊಂದಿಗೆ ಪ್ರೇಕ್ಷಕರನ್ನು ಸಂಗೀತದಲ್ಲಿ ತಲ್ಲೀನ ಗೊಳಿಸಿದರು.

ಕಾರ್ಯುಕ್ರಯ ಇಷ್ಟು ಸೊಗಸಾಗಿ ಮೂಡಿ ಬರಲು ಕಾರಣರಾದ ಪ್ರತೀ ಸದಸ್ಯರಿಗೂ ಕೂಟದ ಕಾರ್ಯ ನಿರ್ವಾಹಕ ಸಮಿತಿಯು ಚಿರ ಋಣಿ. ಅವರ ಶ್ರಮಕ್ಕೆ ನಮ್ಮ ಧನ್ಯವಾದಗಳು. ವರ್ಷಾದ್ಯಂತ ಕೂಟದ ಕೆಲಸವನ್ನು ಸೊಗಾಸಾಗಿ ನಡೆಸಲು ನಮಗೆ ಇದೇ ಪ್ರೇರಣೆ..ಕೂಟದ ಯುಗಾದಿ ಕಾರ್ಯಕ್ರಮ - 'ವಸಂತ ವೈಭವ' - Apr 10th @ Chabot College
ಕೂಟದ ಉಗಾದಿ ವಸಂತ ವೈಭವಕ್ಕೆ ಹೆಸರಾಂತ ಕಲಾವಿದ Dr. B.K.S Varma ಬರುತ್ತಿದ್ದಾರೆ. ಸಂಧರ್ಭಕ್ಕೆ ಅನುಗುಣವಾದ ಚಿತ್ರಕಲೆಯನ್ನು ಥಟ್ ಎಂದು ಪ್ರೇಕ್ಷಕರ ಮುಂದೆ ನಿರ್ಮಿಸುವ ಅಪಾರೂಪದ ಕಲೆಗೆ ಇವರು ಪ್ರಖ್ಯಾತರಾಗಿದ್ದಾರೆ. ಬನ್ನಿ, ಇವರ ನಯನ ಮನೋಹರ ಚಿತ್ರಕಲೆಯನ್ನು ಸುಗಮ ಸಂಗೀತದೊಂದಿಗೆ ಆನಂದಿಸೋಣ.

ಸಮಯ : April 10th 2016 230 PM
ಸ್ಥಳ : Performing Arts Center, Chabot College
25555 Hesperian Blvd, Hayward, CA 94545ಕೂಟದ ಯುಗಾದಿ ಕಾರ್ಯಕ್ರಮ - 'ವಸಂತ ವೈಭವ' ಕ್ಕೆ ಆಹ್ವಾನ

ವಸಂತ ಮಾಸದ ಆಗಮನ ಈಗಾಗಲೇ ನಿಸರ್ಗದಲ್ಲಿ ಗೋಚರಿಸುತ್ತಿದೆ. ಸುಗ್ಗಿಯ ಸಂಭ್ರಮವನ್ನು ಆಚರಿಸಿದ ಸಮಿತಿ ಈಗ "ವಸಂತ ವೈಭವ" ಕ್ಕೆ ಸಿದ್ಧವಾಗುತ್ತಿದೆ. ನಿಸರ್ಗದ ವಿವಿಧತೆಯನ್ನು, ಮನದಲ್ಲಿಟ್ಟುಕೊಂಡು "ವೈವಿಧ್ಯತೆಯಲ್ಲಿ ವಿಶೇಷತೆ" ಎಂಬ ವಿಷಯವನ್ನು ಮನರಂಜನಾ ಸಮಿತಿ 'ವಸಂತ ವೈಭವದ' ಪ್ರಧಾನ ವಸ್ತುವನ್ನಾಗಿಸಿ ಕೊಂಡಿದೆ. ತಮ್ಮಲ್ಲಿರುವ ಸೃಜನಶೀಲತೆಯನ್ನು ಸಾಕಾರರೂಪಗೊಳಿಸಿ, ಕನ್ನಡ ಕೂಟದ ವೇದಿಕೆಯ ಮೇಲೆ ಪ್ರದರ್ಶಿಸಲು ಈ ಮೂಲಕ ತಮ್ಮನ್ನು ಅಹ್ವಾನಿಸುತ್ತಿದ್ದೇವೆ.

Photography Workshop - April 02ರಂದು Milpitas Police Station Hall ನಲ್ಲಿ

ನಮ್ಮ ಮೆಚ್ಚಿನ ರವಿ ಶೇಖರ್ ಅವರು ಕನ್ನಡ ಕೂಟದ ಜನತೆಗೆ ಫೋಟೋಗ್ರಫೀ ತರಬೇತಿ ಶಿಬಿರವನ್ನು ಆಯೋಜಿಸಲು ಸಮ್ಮತಿಸಿದ್ದಾರೆ. ನೀವೆಲ್ಲ ಇದರ ಸದುಪಯೋಗ ಪಡೆಯಬೇಕೆಂದು ಕೇಳುತ್ತೇವೆ. ನಿಮಗೆ ಫೋಟೋಗ್ರಫೀ ಕಲೆಯುವ ಹಂಬಲವಿದ್ದಲ್ಲಿ ಇಂದೇ ನೋಂದಾಯಿಸಿ. ತರಬೇತಿಯು, ಕೂಟದ ಸದಸ್ಯರಿಗೆ ಸೀಮಿತವಾಗಿದ್ದು , ಯಾವುದೇ ಶುಲ್ಕ ವ್ಯಯ ಮಾಡುವಂತಿರುವಿದಿಲ್ಲ.

ಸಮಯ : April 2nd 2016 430PM to 630PM
ಸ್ಥಳ : 1275 N Milpitas Blvd, Milpitas, CA 95035

Register hereಕನ್ನಡ ಕೂಟ ಪ್ರಸ್ತುತ ಪಡಿಸಲಿದೆ "ರಾಕ್ ಆನ್ ರಾಗ !!! " - ಮಾರ್ಚ್ 20th 2016

ಕನ್ನಡ ಕೂಟ ಮಾರ್ಚ್ 20 ರಂದು ನಮ್ಮ ಬೇ ಏರಿಯಾದ ಸುಪ್ರಸಿದ್ದ ಕನ್ನಡ ಮ್ಯೂಸಿಕ್ ಬ್ಯಾಂಡ್ "ರಾಗ" ಜೊತೆಗೂಡಿ, "ರಾಕ್ ಆನ್ ರಾಗ !!!" ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ. ಇಂದೇ ನಿಮ್ಮ ಟಿಕೆಟ್ ಪಡೆದುಕೊಳ್ಳಿ - http://tinyurl.com/hry2wqc. ಇದರಿಂದ ಸಂಗ್ರಹಿಸಿದ ಧನವನ್ನು"ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್" ಮತ್ತು "ಒನ್ ಸ್ಕೂಲ್ ಅಟ್ ಆ ಟೈಮ್" ಸಂಸ್ಥೆಗಳಿಗೆ ಕೊಡಲಾಗುವುದು.

ಗಮನಿಸಿ, ಈ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಭಾನುವಾರ ಮಾರ್ಚ್ ೨೦ಕ್ಕೆ ಮುಂದೂಡಲಾಗಿದೆ.ಪ್ರತಿಭಾವಂತ ಕನ್ನಡ ಕೂಟದ ಸದಸ್ಯರೆ, ತಮ್ಮಲ್ಲಿ ಅಡಗಿರುವ ಹಾಡುಗಾರ ಅಥವಾ ಹಾಡುಗಾರ್ತಿ ಅವಕಾಶಕ್ಕಾಗಿ ಕಾಯುತ್ತಿರುವರೆ? ರಾಜೇಶ್ ಕೃಷ್ಣನ್ ಅವರೆದುರು ಹಾಡುವ ಆಸೆ ಕೂಡ ಇದೆಯೆ? ಇಗೊ ಇಲ್ಲೊಂದು ಸುವರ್ಣಾವಕಾಶ ನಿಮ್ಮೆಲ್ಲರ ಮುಂದೆ.
ರಾಜೇಶ್ ಕೃಷ್ಣನ್ ಅವರೊಂದಿಗೆ 'ಸಪ್ತಸ್ವರ'.
ನಿಮ್ಮ ಧ್ವನಿ ಸುರಳಿಯನ್ನು(audio) ಅಥವ video with audio ನಮಗೆ ಕಳಿಸಿ. (Approx 1 minute)
ಕನ್ನಡ ಚಿತ್ರ ಹಿನ್ನೆಲೆ ಗಾಯಕರಾದ "ಶಷಾಂಕ್ ಶೇಷಗಿರಿ" ಅವರ ತೀರ್ಪಿನ ಪ್ರಕಾರ ಕೊನೆಯ ಕೆಲವು ಸ್ಪರ್ದಿಗಳು ರಾಜೇಶ್ ಕೃಷ್ಣನ್ ಅವರೆದುರು ಹಾಡುವರು. ಇವರಲ್ಲಿ ವಿಜೇತರನ್ನು ಸ್ವತಹ ರಾಜೇಶ್ ಕೃಷ್ಣನ್ ಆಯ್ಕೆ ಮಾಡುವರು.
ಎಲ್ಲರಿಗು ಅವಕಾಶ. 8-12(sub-junior) 13-15(junior) 15+Adults. ಇದರೊಂದಿಗೆ 'ಸಪ್ತ ಸ್ವರ' ದ ಸಂಜೆ ರುಚಿಯಾದ ಊಟ ಹಾಗು ರಾಜೇಶ್ ಕೃಷ್ಣನ್ ಅವರೊಂದಿಗೆ Photo.
ಇನ್ನೇಕೆ ತಡ, Entry ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 23rd, 2016.

Register for ಸಪ್ತಸ್ವರ


Sign up for KKNC 2015 Membership sticky icon

ಮಾನ್ಯರೇ

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ ನಿಮ್ಮೆಲ್ಲರ ಬೆಂಬಲಕ್ಕೆ ವಂದನೆಗಳು. ನಿಮ್ಮ ಅವಿರತ ಪರಿಶ್ರಮ ಹಾಗೂ ಬೆಂಬಲದಿಂದಷ್ಟೇ ನಮ್ಮ ಕನ್ನಡ ಕೂಟ ವಿಶ್ವದಲ್ಲಿಯೇ ಅತಿ ದೊಡ್ಡ ಹಾಗೂ ಬಲಶಾಲಿ ಕನ್ನಡ ಕೂಟಗಳಲ್ಲಿ ಒಂದಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕೂಟದ ಕಾರ್ಯಕ್ರಮಗಳ ಸಂಖ್ಯೆ ಹಾಗೂ ಗುಣಮಟ್ಟ ಗಮನೀಯವಾಗಿ ಹೆಚ್ಚಾಗಿದೆ. ಇತ್ತೀಚೆಗೆ ಭರ್ಜರಿಯಾಗಿ ನಡೆದ ಅಕ್ಕ-೨೦೧೪ ಬೇ ಏರಿಯಾ ಕನ್ನಡಿಗರ ಹಾಗೂ ನಮ್ಮ ಕನ್ನಡ ಕೂಟದ ಕ್ಷಮತೆ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿದೆ.
ಇಷ್ಟಾಗಿಯೂ ಕನ್ನಡ ಕೂಟ ಲಾಭ-ನಿರಪೇಕ್ಷಿತ ಹಾಗೂ ಸ್ವಯಂಸೇವಕರ ಆಧಾರದ ಮೇಲೆ ನಡೆಯುತ್ತಿರುವ ಸಂಘಟನೆಯಾಗಿದ್ದು ಕೇವಲ ಸದಸ್ಯರ ಕಾಣಿಕೆಗಳ ಮೇಲೆ ಅವಲಂಬಿತವಾಗಿದೆ. ನಿಮಗೆ ತಿಳಿದಿರುವಂತೆ ನಮ್ಮ ಕನ್ನಡ ಕೂಟ ಸದಸ್ಯತ್ವ ಶುಲ್ಕದಲ್ಲಿ ಗಳಿಸುವುದಕ್ಕಿಂತ ಹೆಚ್ಚು ಹಣವನ್ನು ಸದಸ್ಯರ ಮೇಲೆಯೇ ಖರ್ಚು ಮಾಡುತ್ತದೆ. ಈ ವ್ಯತ್ಯಾಸವನ್ನು ಮಾರ್ಕೆಟಿಂಗ್ ಅಥವಾ ಫಂಡ್-ರೇಸಿಂಗ್ ಮೂಲಕ ತುಂಬಲಾಗುತ್ತಿದೆ.
ಆದರೆ ಇತ್ತೀಚೆಗೆ ಬಹಳಷ್ಟು ಹೆಚ್ಚಾಗಿರುವ ಸಭಾಂಗಣ ಶುಲ್ಕಗಳು ನಮ್ಮ ಸದಸ್ಯರಿಂದ ಹೆಚ್ಚಿನ ಸಹಾಯವನ್ನು ಅಪೇಕ್ಷಿಸುವಂತೆ ಮಾಡಿವೆ. ಈ ವರ್ಷದಿಂದ ಕುಟುಂಬ ಸದಸ್ಯತ್ವ ಶುಲ್ಕವು ಹತ್ತು ಡಾಲರ್ ಹೆಚ್ಚಾಗಲಿದೆ. ಆ ಹೆಚ್ಚಳವನ್ನು ಆದಷ್ಟು ಕಡಿಮೆ ಪರಿಣಾಮದಲ್ಲಿ ಇಡಲು ನಮ್ಮ ತಂಡಗಳು ಬಹಳ ಪ್ರಯತ್ನ ಪಟ್ಟಿವೆ. ಸದ್ಯರೆಲ್ಲರೂ ತಮ್ಮ ಬೆಂಬಲ ಹಾಗೂ ವಿಶ್ವಾಸಗಳನ್ನು ಮುಂದುವರೆಸುತ್ತಾ ಕನ್ನಡ ಕೂಟವನ್ನು ಮತ್ತಷ್ಟು ಬಲಶಾಲಿಗೊಳಿಸುತ್ತೀರೆಂದು ನಂಬಿದ್ದೇವೆ.
ಕುಟುಂಬ ಹಾಗೂ ವೈಯಕ್ತಿಕ ಸದಸ್ಯತ್ವ ವಿವರಗಳು ನಮ್ಮ ಜಾಲತಾಣದಲ್ಲಿ (www.kknc.org) ಲಭ್ಯವಿವೆ. ಈ ವಿಷಯದ ಬಗ್ಗೆ ಮತ್ತಷ್ಟು ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

- ಕನ್ನಡ ಕೂಟದ ತಂಡ


Dear Patron,

Thank you for your continued support to the Kannada Koota of Northern California (KKNC) over the years. It is with your unwavering support that this organization has grown to be one of the biggest and the strongest Kannada associations in the world outside of Karnataka.

As you have witnessed over the past few years, both the quantity and quality of activities at KKNC have grown tremendously - we have been organizing more cultural events with superior programs, have made much bigger charitable contributions and have come up with new and innovative initiatives for the benefit of the community. The phenomenal success of the recently held AKKA World Kannada Conference - 2014 is a standing testimony to the great talent and execution abilities of KKNC.

All this growth has come at a price, unfortunately. KKNC being a non-profit and volunteer based organization, relies heavily upon its members to sustain, leave alone excel. As you may very well be aware, KKNC spends far more on members than the membership fee it collects from them to conduct all its activities. For many years now, KKNC has supplemented the deficit through its marketing and/or fundraising activities.

However, the recent steep increase in auditorium costs has forced us to reach out to our strong member base for additional help. Starting this year, the annual family membership fees will go up by $10. We have made every effort to minimize the increase, and hope that you will continue to support us in making this organization even more powerful in building a stronger Kannada community in the Bay Area.

Detailed information on individual and family memberships are available on our website (www.kknc.org). If you have any additional questions, please don’t hesitate to contact us.

KKNC 2015 Committee

Our Partners