KKNC Deepothsava on Nov 19th at Foothill College sticky icon

ಕನ್ನಡೋತ್ಸವ ಸೆಪ್ಟೆಂಬರ ೧೭ರಂದು ಶಬೊ ಕಾಲೇಜುನಲ್ಲಿ !!

We are inviting 15 Well Known Artists from India to felicitate them as part of this event. So, please join us in welcoming them and honor them for their achievements in the music industry

ಕನ್ನಡ ಕೂಟದ 2016ರ ತಂಡ ಈ ಬಾರಿ ಕನ್ನಡೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ ೧೭ರಂದು ಶಬೊ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸುತ್ತಿದೆ. ಇದು ದಿನವಿಡೀ ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ,ಅನೇಕ ಚಟುವಟಿಕೆಗಳು ಸಭಾಂಗಣದ ಒಳಗೂ ಹೊರಗೂ ನಡೆಯಲಿವೆ. ಈ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಚಟುವಟಿಕೆಗಳು ೩ ವಿಭಾಗಳಲ್ಲಿ ನಡೆಯಲಿವೆ.

1. KKNC Got Talent (Competition)
2. KKNC ಕನ್ನಡ ಕಲರವ - ಕಂಸಾಳೆ, ಫ್ಯಾಷನ್ ಷೋ, ಬೀದಿ ನಾಟಕ,
ಆರು ಗುಣಗಳ ಸತ್ಯ - ಪಂಪಾ ನಾಟ್ಯವೃಂದದವರಿಂದ ಭರತನಾಟ್ಯ
3. Mano Lahari


Buy Tickets - here

೩. Mano Lahari - Mano Murthy Musical night

1 Kannadothsava Ticket = KKNC Got Talent + KKNC ಕನ್ನಡ ಕಲರವ + Mano Lahari

Buy Kannadothsava Tickets - here


ಸ್ವರ್ಣಸೇತು ೨೦೧೬ರ ಕಥಾಸ್ಪರ್ಧೆ !!
Deadline Extended to Sept 30th 2016

ಪ್ರತಿಯೊಬ್ಬರಲ್ಲೂ ಒಬ್ಬ ಒಳ್ಳೆಯ ಕಥೆಗಾರನೊಬ್ಬ ಅಡಗಿರುತ್ತಾನೆ. ಅವನಿಗೆ ಅಕ್ಷರ ರೂಪ ಕೊಟ್ಟು ಸಾಕ್ಷಾತ್ಕಾರಗೊಳಿಸಲು, ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ "ಸ್ವರ್ಣ ಸೇತು ೨೦೧೬" ಸುವರ್ಣಾವಕಾಶವೊಂದನ್ನು ನೀಡುತ್ತಿದೆ. ಕೌತುಕ ಕಥೆಯೊಂದನ್ನು ಬರೆಯಿರಿ. ಬಹುಮಾನವನ್ನು ಗೆಲ್ಲಿರಿ!

ಸ್ಪರ್ಧೆಯ ನಿಯಮಗಳು :

೧. ಕಥೆ ೧೫೦೦ ಪದಗಳನ್ನು ಮೀರದಿರಲಿ
೨. ಕಥೆ ಸ್ವಂತದ್ದಾಗಿರಬೇಕು
೩. ಕಥೆ ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು
೪. ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ
೫. ಭಾಷಾಂತರಿಸಿದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ
೬. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
೭. ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
೮. ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
೯. ಆಯ್ದ ಕಥೆಗಳನ್ನು ಸ್ವರ್ಣಸೇತು - ೨೦೧೬ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-೨೦೧೬ರ ಸಂಪಾದಕ ಸಮಿತಿಗೆ ಸೇರಿದ್ದು.
೧೦. ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು.
೧೨. ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ Sept 30th 2016
೧೩. ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - swarnasetu2016@googlegroups.com
Dr BKS Varma ಅವರೊಡನೆ ಕೂಟದ ವಸಂತ ವೈಭವ !!
ಕೂಟದ ವಸಂತ ವೈಭವ ಕಾರ್ಯಕ್ರಮ ಏಪ್ರಿಲ್ 10ರಂದು ಛಾಬೊ ಕಾಲೇಜ್ ನಲ್ಲಿ ಮೂಡಿಬಂದಿತು. ಸಂಧರ್ಭಕ್ಕೆ ಅನುಗುಣವಾದ ಚಿತ್ರಕಲೆಯನ್ನು ಥಟ್ ಎಂದು ಪ್ರೇಕ್ಷಕರ ಮುಂದೆ ನಿರ್ಮಿಸಿದರು ಅಪರೂಪದ ಚಿತ್ರ ಕಲಾವಿದ Dr BKS Varma.ಅವರೊಡನೆ ನಾಗಚಂದ್ರಿಕೆ ಭಟ್ ಅವರ ಗಾಯನ ನೆರೆದ ಜನರ ಮನ ಸೆಳೆಯಿತು. ಜೊತೆಗೆ ನಾಟ್ಯದಲ್ಲಿ ಗಣೇಶ್ ವಾಸುದೇವ ಹಾಗೂ ವಾದ್ಯ ವೃಂದದಲ್ಲಿ ಸ್ಥಳೀಯ ವಾದಕರು ಗೀತ-ಚಿತ್ರ-ನೃತ್ಯ ವೈಭವವನ್ನು ವಿಜೃಂಭಣೆಯಿಂದ ನಡೆಸಿ ಕೊಟ್ಟರು.

ಕಾರ್ಯಕ್ರಮ ಯಶಸ್ವಿ ಯಾಗಿ ಮೂಡಿಬರಲು ಶ್ರಮಿಸಿದ ಮನೋರಂಜನಾ ಸಮಿತಿ, ಸದಸ್ಯತ್ವ ಸಮಿತಿ ಹಾಗೂ ಊಟದ ವ್ಯವಸ್ಥೆ ನಡೆಸಿಕೊಟ್ಟ ಸ್ವಯಂ ಸೇವಕರಿಗೂ , ಛಾಯಾಗ್ರಹಣ, ಅಲಂಕರಣದಲ್ಲಿ ನೆರವಾದವರಿಗೂ, ಸ್ವರ್ಣಸೇತು ವರದಿಗಾರರಿಗೂ ನಮ್ಮ ಅನಂತಾನಂತ ಧನ್ಯವಾದಗಳು.

ಪ್ರೇಕ್ಷಕರ ಮನ ಸೆಳೆದ "ರಾಕ್ ಆನ್ ರಾಗ "

ಕನ್ನಡ ಕೂಟ ಮಾರ್ಚ್ 20 ರಂದು ನಮ್ಮ ಬೇ ಏರಿಯಾದ ಸುಪ್ರಸಿದ್ದ ಕನ್ನಡ ಮ್ಯೂಸಿಕ್ ಬ್ಯಾಂಡ್ "ರಾಗ" ಜೊತೆಗೂಡಿ, "ರಾಕ್ ಆನ್ ರಾಗ !!!" ಕಾರ್ಯಕ್ರಮವನ್ನು ಆಯೋಜಿಸಿತು. ಇದರಿಂದ ಸಂಗ್ರಹಿಸಿದ ಧನವನ್ನು"ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್" ಮತ್ತು "ಒನ್ ಸ್ಕೂಲ್ ಅಟ್ ಆ ಟೈಮ್" ಸಂಸ್ಥೆಗಳಿಗೆ ಕೊಡಲಾಗುವುದು. ನಯನ ಮನೋಹರ ದೀಪ ರಂಜಿತ ಸಭಾಂಗಣವು ಪ್ರೇಕ್ಷಕರನ್ನು ಧಿಗ್ಭ್ರಮೆ ಗೊಳಿಸುತ್ತಿದ್ದಂತೆ ರಾಗ ತಂಡದ ಕಲಾವಿದರು ತಮ್ಮ ಸುಶ್ರಾವ್ಯ ಸಂಗೀತದಲ್ಲಿ ಮೈ ಮರೆಸಿದರು. ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಿಕೊಟ್ಟ ರಾಗ ತಂಡಕ್ಕೆ ಕೂಟದ ಕಾರ್ಯಕಾರಿ ಸಮಿತಿ ಚಿರ ರುಣಿ.

ಸ್ನೇಹ ಸುಗ್ಗಿಯ ಪ್ರಯುಕ್ತ ಸಾವಿರಕ್ಕೂ ಮೀರಿದ ಕನ್ನಡ ಕೂಟದ ಜನ ಸಮೂಹ !!

ಮದ್ಯಾಹ್ನ 2ಕ್ಕೆ ಡೊಳ್ಳಿನ ಸದ್ದು ಬೇ ಏರಿಯಾ ಕನ್ನಡ ಜನ ಸಮೂಹವನ್ನು ಕಾರ್ಯಕ್ರಮಕ್ಕೆ ಬರೆ ಮಾಡಿಕೊಂಡಿತು. ನಮ್ಮ ಸದಸ್ಯತ್ವ ಸಮಿತಿ ನೆರೆದ ಜನರಿಗೆಲ್ಲ ಸದಸ್ಯತ್ವ ಪಡೆದು ದಿನದ ಕಾರ್ಯಕ್ರಮಕ್ಕೆ ನೋಂದಾಯಿಸಲು ಅನು ಮಾಡಿಕೊಟ್ಟಿತು. ಮೆರವಣಿಗೆಯ ಸಡಗರದಲ್ಲಿ ಸದಸ್ಯರು ಜೊತೆಗೂಡಿ ಒಮ್ಮತದಿಂದ ರಂಗಾಯಣವನ್ನು ಪ್ರವೇಶಿಸಿದರು.

ದೀಪ ಬೆಳಗಿ ಸದಸ್ಯರನ್ನು ಆಹ್ವಾನಿಸಿದರು ಕೂಟದ ಅಧ್ಯಕ್ಷರು. ಶ್ಲೋಕ ಉಚ್ಚಾರಣೆಯೊಂದಿಗೆ ಪ್ರಾರಂಭ ವಾದ ವೇದಿಕೆ, ಭಾವಧಾರೆ, ಪುಣ್ಯಕೋಟಿ, ಮಕ್ಕಳ ಜಾನಪದ ನೃತ್ಯ, ಅಪರೂಪದ ಕೊರವಂಜಿ ನೃತ್ಯ , ದಂಡಪಿಂಡಗಳು ಎಂಬ ಹಾಸ್ಯ ನಾಟಕ ನೆರೆದವರನ್ನು ಮನೋರಂಜಿಸಿತು. ಕೂಟದಿಂದ ಆಯೋಜಿಸಿದ ಪಂಚತಂತ್ರ ಪ್ರೇಕ್ಷಕರನ್ನು ಸೆಳೆಯಿತು.

ಒಂದು ತಾಸು ನೀಡಿದ ವಿರಾಮದಲ್ಲಿ, ಸದಸ್ಯರು, ರುಚಿಯಾದ ಭೋಜನ ಸವಿಯುತ್ತಾ ನಮ್ಮ ಚಂದಾ ನಿಗ್ರಹಣಾ ಸಮಿತಿ ಆಯೋಜಿಸಿದ ಪ್ರಾಯೋಜಕರ ಬೀಡುದಾಣಗಳಿಗೆ ಭೇಟಿ ಕೊಟ್ಟರು. ನಂತರ ನಡೆಯಿತು ನಯನ ಮನೋಹರ ತೊಗಲು ಗೊಂಬೆ ಆಟ. ನಡೆಸಿಕೊಟ್ಟ ಶ್ರೀ ಗುಂಡು ರಾಜು ಅವರಿಗೆ ಅನಂತಾನತ ಧನ್ಯವಾದಗಳು. ವಿಶೇಷ ಅತಿಥಿಗಳಾದ ಶ್ರೀಯುತ ರಾಜೇಶ್ ಕೃಷ್ಣನ್ ರವರು, ಶ್ರೀಮತಿ ಶೀಲಾ ರವರೊಂದಿಗೆ ಪ್ರೇಕ್ಷಕರನ್ನು ಸಂಗೀತದಲ್ಲಿ ತಲ್ಲೀನ ಗೊಳಿಸಿದರು.

ಕಾರ್ಯುಕ್ರಯ ಇಷ್ಟು ಸೊಗಸಾಗಿ ಮೂಡಿ ಬರಲು ಕಾರಣರಾದ ಪ್ರತೀ ಸದಸ್ಯರಿಗೂ ಕೂಟದ ಕಾರ್ಯ ನಿರ್ವಾಹಕ ಸಮಿತಿಯು ಚಿರ ಋಣಿ. ಅವರ ಶ್ರಮಕ್ಕೆ ನಮ್ಮ ಧನ್ಯವಾದಗಳು. ವರ್ಷಾದ್ಯಂತ ಕೂಟದ ಕೆಲಸವನ್ನು ಸೊಗಾಸಾಗಿ ನಡೆಸಲು ನಮಗೆ ಇದೇ ಪ್ರೇರಣೆ..

Come and Explore KKNC !!! sticky icon

ಕನ್ನಡ ಕೂಟದಲ್ಲಿ ಸದಾ ಕನ್ನಡದ ಕಾರ್ಯಕ್ರಮಗಳನ್ನು ಮಾಡುವ ಸಂಭ್ರಮ. ಪ್ರತಿ ಕಾರ್ಯಕ್ರಮಕ್ಕೂ ಅನೇಕ ಸಿದ್ಧತೆಗಳು ಬೇಕು. ಪ್ರತಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಅನೇಕ ಕಾರ್ಯಕರ್ತರ ಶ್ರಮದ ದುಡಿಮೆ ಇರುತ್ತದೆ. ಇದು ಶ್ರಮ ಅಲ್ಲ. ಕನ್ನಡದ ಮೇಲಿನ ಅಭಿಮಾನದಿಂದ ಮಾಡುವ ಕೆಲಸ. ನೀವೂ ಸಹ ಈ ವರ್ಷ ನಮ್ಮ ೨೦೧೬ ತಂಡದೊಡನೆ ಸೇರಿ ನಿಮ್ಮ ಸ್ನೇಹಿತರ ಗುಂಪನ್ನು ವಿಸ್ತರಿಸಬಹುದು.

1973ರಿಂದ ಹಲವಾರು ಸ್ವಯಂಚಾಲಕರು ಸೇವೆ ಸಲ್ಲಿಸಿ ನಮ್ಮ ಬೇ ಏರಿಯಾ ಕನ್ನಡ ಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಬನ್ನಿ, ಈ ವರುಷ ನಾವೆಲ್ಲಾ ಕೈ ಜೋಡಿಸಿ ಕನ್ನಡ ಕೂಟದ ಸೊಬಗನ್ನು ಮತ್ತಷ್ಟು ಹೆಚ್ಚಿಸೋಣ

ಆಸಕ್ತಿ ವ್ಯಕ್ತಪಡಿಸಿ - Volunteer Sign up

Grand Sponsors

Our Partners