You are hereSwara Sanjeevini on March 24th, 2018 at Carrington Hall, Redwood City, CA

Swara Sanjeevini on March 24th, 2018 at Carrington Hall, Redwood City, CA


By admin - Posted on 07 August 2015

ಸಂಕ್ರಮಣ 2018 ಜನವರಿ 20 ರಂದು ಶಬೊ ಕಾಲೇಜು ಆವರಣದಲ್ಲಿ !

ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಹನ್ನೆರಡು ಕವನ ಸಂಗ್ರಹಗಳನ್ನು, ಎರಡು ಕಾದಂಬರಿಗಳನ್ನು, ಒಂದು ಸಣ್ಣ ಕಥೆಗಳ ಸಂಕಲನವನ್ನು, ಒಂದು ವಿಮರ್ಶ ಲೇಖನಗಳ ಸಂಕಲನವನ್ನು, ಹದಿಮೂರು ಅನುವಾದಿತ ಗ್ರಂಥಗಳನ್ನು ಕನ್ನಡಕ್ಕೆ ನೀಡಿದ ಪ್ರತಿಭಾಶಾಲಿ. ಇಂತಹ ನವ್ಯ ಕಾವ್ಯ ಪ್ರಕಾರದ ಯುಗಪ್ರವರ್ತಕ ಕವಿ "ಮೊಗೇರಿ ಗೋಪಾಲಕೃಷ್ಣ ಅಡಿಗರ" ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಮ್ಮ ಕನ್ನಡ ಕೂಟದ ಮೊದಲ ಕಾರ್ಯಕ್ರಮವಾದ ಸಂಕ್ರಮಣಕ್ಕೆ ತಪ್ಪದೇ ಬನ್ನಿ. ಕನ್ನಡ ಕೂಟದ ಸದಸ್ಯರಿಗೆ ಉಚಿತ ಪ್ರವೇಶ. ಸದಸ್ಯರಾಗಿರದೇ ಇದ್ದವರು ಇಂದೇ ನಿಮ್ಮ ಸದಸ್ಯತ್ವವನ್ನು ನವೀಕರಿಸಿ (kknc.org/join).


ಪ್ರಸಿದ್ಧ ಕನ್ನಡ ಹಾಸ್ಯನಟರಾದ ರಿಚರ್ಡ್ ಲೂಯಿಸ್ ಹಾಗೂ ಮೈಸೂರು ಆನಂದ್ ನಮ್ಮ ಕನ್ನಡಕೂಟದ ಸಂಕ್ರಮಣಕ್ಕೆ ಬರ್ತಾ ಇದ್ದಾರೆ. ಮರೆಯದೆ ಸಂಕ್ರಮಣಕ್ಕೆ ಬನ್ನಿ , ಸಂಭ್ರಮಿಸೋಣ. ಇಂದೇ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸಿ, ಸದಸ್ಯರಾಗಿರದವರು ಇಂದೇ ಸದಸ್ಯರಾಗಿ.

ಸಂಕ್ರಮಣ, ಅಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲ!
ದಕ್ಷಿಣಾಯಣದಲ್ಲಿ ಬರುವ ಮಳೆಗಾಲದ ಮಳೆ, ಚಳಿಗಾಲದ ಚಳಿ - ಗಾಳಿಯ ಕೊರೆತದಿಂದ ಬರಡಾದ ಜೀವಕ್ಕೆ, ಕೊರಡಾದ ಗಿಡ ಬಳ್ಳಿಗಳಿಗೆ, ಸಂಕ್ರಮಣವು ನವಚೇತನವನ್ನು ಒದಗಿಸುತ್ತಾ, ನಿಸರ್ಗಕ್ಕೆ ಕಾಲಚಕ್ರವನ್ನು ಮುಂದುವರೆಸಲು ಸಹಕರಿಸುತ್ತದೆ. ಅದೇ ರೀತಿ 2018ರ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯು " ಸಂಕ್ರಮಣ” ಎಂಬ ಹೆಸರಿನಲ್ಲಿ ಈ ವರ್ಷದ ಮೊದಲ ಕಾರ್ಯಕ್ರಮವನ್ನು ಜನವರಿ 20ರಂದು ಶಬೊ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸುವ ಮೂಲಕ ವರ್ಷವನ್ನು ಪ್ರಾರಂಭಿಸುತ್ತಿದೆ.
“ವರ್ಣಮಯ ಜಗತ್ತು” ಎನ್ನುವುದು 'ಸಂಕ್ರಮಣದ' ಪ್ರಧಾನ ವಸ್ತು. ಈ ಪ್ರಧಾನ ವಸ್ತುವನ್ನಾಧರಿಸಿ ಹಾಗೂ ನವ್ಯ ಕಾವ್ಯ ಪ್ರಕಾರದ ಯುಗಪ್ರವರ್ತಕ ಕವಿ “ಮೊಗೇರಿ ಗೋಪಾಲಕೃಷ್ಣ ಅಡಿಗರ “ಜನ್ಮ ಶತಮಾನೋತ್ಸವದ ಪ್ರಯುಕ್ತ, ಅಡಿಗರ ಸಾಹಿತ್ಯಾಧಾರಿತ ಕಾರ್ಯಕ್ರಮಗಳು ಸಂಕ್ರಮಣದ ವಿಶೇಷ.

೧. ಗುಂಜನ-- ಕನ್ನಡಕಲಿ ಪುಟಾಣಿಗಳಿಂದ ಸಮೂಹ ಗಾಯನ ಕಾರ್ಯಕ್ರಮ

೨. "ನೋಡು ನಮ್ಮ ನಾಡು" -- ಸರಣಿ ಕಾರ್ಯಕ್ರಮ

೨೦೧೮ ರ ಸಾಲಿನಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವ ಹಾಗು ಕನ್ನಡ ನಾಡಿನ ಕುರಿತು ಅರಿಯುವ ಸಲುವಾಗಿ ಸರಣಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ . ಪ್ರತಿಯೊಂದು ಕಾರ್ಯಕ್ರಮವೂ ಕರ್ನಾಟಕಕ್ಕೆ ಸಂಬಂಧಿಸಿದ ವಾಸ್ತು ಶಿಲ್ಪ , ಕಲೆ , ಚರಿತ್ರೆ , ಮಹಾನ್ ವ್ಯಕ್ತಿಗಳು - ಹೀಗೆ ಬೇರೆ ಬೇರೆ ಆಯಾಮಗಳನ್ನು ಒಳಗೊಂಡಿರುತ್ತದೆ. ಪ್ರತಿ ಸಂಚಿಕೆಯನ್ನು ಬೇರೆ ಬೇರೆ ನಿರ್ದೇಶಕರು ರೂಪಿಸಿ ನಿರ್ದೇಶಿಸುತ್ತಾರೆ. ಸಂಗೀತ, ನೃತ್ಯ ಮತ್ತು ನಾಟಕದಲ್ಲಿ ಆಸಕ್ತಿಯಿರುವ ೮ ರಿಂದ ೧೫ ವರ್ಷಗಳ ಒಳಗಿನ ಮಕ್ಕಳು ಈ ಕಾರ್ಯಕ್ರಮದ ಜೀವಾಳ.

೩. ಸಂಗೀತ ಧಾರೆ -- 'ಪುತ್ತೂರು ನರಸಿಂಹ ನಾಯಕ್' ರಿಂದ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಮುಂತಾದ ಕಾರ್ಯಕ್ರಮಗಳು ಸಂಕ್ರಮಣದ ಭಾಗವಾಗಲಿವೆ.

Sankramana 2018

Jan 20th Chabot College, Hayward CA

Sankramana - The medial period in which the Sun God travels from one sun sign to the other. During this period, the winds traversing from the south, breathe a fresh air of life into the dry and bare nature around us which helps in rejuvenating the life cycle. Likewise, the team of 2018 at KKNC set foot into their term, by hosting their first event of the year, Sankramana on January 20th, at the Chabot College auditorium. The theme of the event being "Varnamaya Jagathu" - a colorful world through which we stage some compositions of Sri Mogeri Gopalakrishnga Adiga, in commemoration of the centenary celebrations of this great poet. A few highlights of this event are:

1. Gunjana --- choir from kannadakali kids.

2. Nodu Namma Naadu -- A Series Program is an initiative aiming to educate the younger generation in various aspects of the glorious state of Karnataka. Each event will showcase many facets of Karnataka such as History, Architecture, Eminent personalities, and art and culture. The prominent artistes of these presentations will be children in the age group of 8 - 15 who will directed by many talented Directors of KKNC.

3. Sangeetha Dhaare: A melodious stream of devotional, light and folk music by Sri Puttur Narasimha Nayak and many more entertaining performances will take stage in the Sankramana event.

2018 Executive Team

Ellarigu Namaskara,

I’m very happy to introduce KKNC’s 2018 executive team. We need all your guidance, help and support. Let’s work together to make a unified and proud community. We are looking forward to a great year with our 2018 KKNC executive team and you all.

If you have not signed up/ renewed your membership yet, please sign up using this link: Join KKNC

2018 ಹೊಸ ವರ್ಷದ ಶುಭಾಶಯಗಳು !

ಕನ್ನಡ ಕೂಟದ ಸಮಸ್ತ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ ತಮಗೂ, ತಮ್ಮ ಕುಟುಂಬದವರಿಗೂ ಸಂತೋಷ ಹಾಗೂ ಸಮೃದ್ಧಿ ತರಲಿ!

ಈ ವರ್ಷವನ್ನು ಹರ್ಷದಾಯಕವಾಗಿಸುವ ಪಯಣಕ್ಕೆ ತಾವೆಲ್ಲರೂ ಕನ್ನಡ ಕೂಟದ ಜೊತೆಯಾಗಿರೆಂದು ಕೋರುತ್ತೇವೆ. 2018 ರ ಕಾರ್ಯಕಾರಿ ಸಮಿತಿಯು ನಮ್ಮ ಮೊದಲ ಕಾರ್ಯಕ್ರಮ "ಸಂಕ್ರಮಣ"ಕ್ಕೆ ಅಣಿಯಾಗುತ್ತಿದೆ. ನಿಮ್ಮೆಲ್ಲರ ಸಲಹೆ, ಸಹಕಾರ ಮತ್ತು ಬೆಂಬಲವು ಎಂದಿನಂತೆ ನಮ್ಮೊಂದಿಗಿರಲೆಂದು ಕೋರುತ್ತೇವೆ.

ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳೊಂದಿಗೆ,
ವಂದನೆಗಳು,
ಕಾರ್ಯಕಾರಿ ಸಮಿತಿ - 2018

ಆತ್ಮೀಯ ಕನ್ನಡ ಕೂಟ ಬಾಂಧವರೇ,
ನಾವು ದೇಶಾಂತರಕ್ಕೆ ಬಂದರೂ ನಮ್ಮ ಭಾಷೆ, ಸಂಸೃತಿಯನ್ನು ಮರೆಯದಿರೋಣ. ಬನ್ನಿ ,ಇಂದೇ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸಿ, ಸದಸ್ಯರಾಗಿರದವರು ಇಂದೇ ಸದಸ್ಯರಾಗಿ ಈ ಮುಖ್ಯವಾಹಿನಿಯನ್ನು ಮಹಾಪ್ರವಾಹವಾಗಿಸಿ.

Dear KKNC members and supporters,
Even if we travel on foreign lands let us not forget our mother tonge and culture. come and renew /register your KKNC membership for 2018. Please click here to renew/register your membership online.Like this on Facebook

Our Partners