You are hereHURRY! REGISTER FOR KANNADA KALI !

HURRY! REGISTER FOR KANNADA KALI !


ಕನ್ನಡ ಕಲಿ

“ಕನ್ನಡ ಕಲಿ” ೨೦೧೭ರ ವಸಂತಮಾಸದಲ್ಲಿ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟಿತು. “ಆಟದೊಡನೆ ಪಾಠ” ಎನ್ನುವ ಧ್ಯೇಯವನ್ನಿಟ್ಟುಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಗುನಗುತ್ತಾ - ತಂದೆತಾಯಿಯರ ಒತ್ತಾಯವಿಲ್ಲದೆ ಪ್ರತಿವಾರ ತರಗತಿಗೆ ಬರುತ್ತಿರುವುದು ನಮಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ! ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮವು ನೂರಾರು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದೆ. ಅನೇಕ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಒಟ್ಟಿಗೆ ನಿಂತು, ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಕ್ಕಳಿಗೆ ಅಕ್ಷರಾಭ್ಯಾಸ, ಕಾಗುಣಿತ ಇತ್ಯಾದಿಗಳನ್ನು ಹೊಸ ರೀತಿಯಲ್ಲಿ ಕಲಿಸಲು ನಾವು ಸದಾ ಶ್ರಮಿಸುತ್ತೇವೆ. ಹೊಸದಾದ ಮತ್ತು ಆಕರ್‍ಷಕವಾದ ಪುಸ್ತಕಗಳನ್ನು, ಹಾಡು-ಹಸೆಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಹುಡುಕಿ ತರುತ್ತೇವೆ.

“ಕನ್ನಡ ಕಲಿ”ಯ ಯಶಸ್ಸಿಗೆ ಮುಖ್ಯವಾಗಿ ಮಕ್ಕಳ ಉತ್ಸಾಹ, ತಂದೆತಾಯಿಯರ ಪ್ರೋತ್ಸಾಹ ಮತ್ತು ಸ್ವಯಂಸೇವಕ ಉಪಾಧ್ಯಾಯ ವೃಂದದ ಶ್ರದ್ಧೆ, ಆಸಕ್ತಿ, ಮತ್ತು ಅವಿರತ ದುಡಿಮೆಯೇ ಕಾರಣ. ಇವರಿಗೆ ಸಹಾಯಕರಾಗಿ ಕೆಲಸ ಮಾಡುವ ಸ್ವಯಂಸೇವಕ ವಿದ್ಯಾರ್ಥಿಗಳ ಉತ್ಸಾಹಿ ತಂಡದ ಸೇವೆ ಬಹಳ ಪ್ರಶಂಶನೀಯ. ಇವರೆಲ್ಲರ ಅಪಾರ ಕನ್ನಡ ಪ್ರೀತಿ ನಿಜವಾಗಿಯೂ ಮೆಚ್ಚುವಂತಹದ್ದು. ಪ್ರತಿ ಶನಿವಾರ ತಮ್ಮ ಅಮೂಲ್ಯವಾದ ಸಮಯವನ್ನು ”ಕನ್ನಡ ಕಲಿ”ಗೆ ಮೀಸಲಾಗಿಟ್ಟು, ಪ್ರತಿಯಾಗಿ ಏನನ್ನೂ ಬಯಸದೆ, ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ವಿದ್ಯಾದಾನ ಮಾಡುತ್ತಿದ್ದಾರೆ. ಇವರ ಕನ್ನಡ ಪ್ರೀತಿ ಹೀಗೇ ಮುಂದುವರೆಯಲಿ!

ಕನ್ನಡ ಕಲಿ 2017-18 ರ ದಾಖಲಾತಿ ಪ್ರಾರಂಭವಾಗಿದೆಯೆಂದು ತಿಳಿಸಲು ಕನ್ನಡ ಕಲಿ ತಂಡ ಹೆಮ್ಮೆಪಡುತ್ತದೆ

ಪ್ರತಿ ವರ್ಷದಂತೆ ಈ ವರುಷವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಮುಂದಿನ ಮೇ ತಿಂಗಳವರೆಗೂ ನಡೆಯಲಿದೆ . ಶಾಲೆಯನ್ನು ಮಿಲ್ಪೀಟೆಸ್ ನ BAYVP ಟೆಂಪಲ್ನಲ್ಲಿ, ಸಂಜೆ 4-5ರ ವರೆಗೆ ನಡೆಸಲಾಗುತ್ತದೆ.

ಈ ವರ್ಷವೂ ಸಹ ಪೋಷಕರ ವಿನಂತಿಯ ಮೇರೆಗೆ, ಕನ್ನಡ ಕಲಿ ದಾಖಲಾತಿಯನ್ನು ಶಾಲಾದಿನಕ್ಕೂ ಮುಂಚಿತವಾಗಿ ತೆರವು ಗೊಳಿಸಿದ್ದೇವೆ.

ನೋಂದಾಯಿಸಲು, ಈ ಕೆಳಕಂಡ ದಾಖಲಾತಿ ಮನವಿ ಪತ್ರವನ್ನು ಭರ್ತಿಮಾಡಿ, ೨೦೧೭-೧೮ರ ಉಪಪ್ರಾಂಶುಪಾಲರು ಮತ್ತು ಖಜಾಂಚಿಯೂ ಆದ ಶ್ರೀಮತಿ ಸಂಧ್ಯಾ ಗಾಯತ್ರಿ ಅಥವಾ ೨೦೧೭-೧೮ರ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಸರಗೂರ್ ಅವರಿಗೆ ಚೆಕ್ಕು/ನಗದು ಶುಲ್ಕದ ಜೊತೆಗೆ ತಲುಪಿಸ ಬೇಕಾಗಿ ಕೋರುತ್ತೇವೆ.

ದಾಖಲಾತಿ ಮನವಿ ಪತ್ರ - https://goo.gl/DEqt2b

ಮೇ 31ರವರೆಗೂ ವಿಶೇಷ ರಿಯಾಯಿತಿ ಶುಲ್ಕವಿರುವ ಕಾರಣ, ಆದಷ್ಟೂ ಅಷ್ಟರ ಒಳಗೆ ನೋಂದಾಯಿಸ ಬೇಕೆಂದು ಕೋರುತ್ತೇವೆ. ಜೂನ್ 30 ನೋಂದಾಯಿಸಲು ಕೊನೆಯ ದಿನಾಂಖ.

ವಂದನೆಗಳೊಂದಿಗೆ,
ಕನ್ನಡ ಕಲಿ ತಂಡ

ಹೆಚ್ಚಿನ ಪ್ರಶ್ನೆ/ವಿವರಗಳಿಗೆ, ಸಂಪರ್ಕಿಸಿ: ಜ್ಯೋತಿ ಸರಗೂರ್ ([email protected]), ಪ್ರಾಂಶುಪಾಲರು, ೨೦೧೭-೧೮

Social Media

Grand Annual Sponsor

Gold Sponsor

Sponsor

Yugadi Event Sponsor